ಮನದರಸಿಗೊಂದು ಕವಿತೆ
ಗೆಜ್ಜೆಯ ನಾದವು ಘಲ್ಲೇನುತಿರಲು
ನಯನಗಳೆರೆದು ನಿನ್ನ ಅರಸುತ್ತಿರಲು
ನನ್ನ ಸನಿಹದಲ್ಲೇ ನೀನಾಗಾಗ ಬರಲು
ಹೃದಯದ ಬಡಿತವು ಏರುತಿದೆ
ಮನಸ್ಸು ಮರ್ಕಟದಂತೆ ಕುಣಿಯುತಿದೆ.
ನಿನ್ನ ನೋಡುತ ನನ್ನನೆ ನಾ ಮರೆತಿರುವೆ
ಪ್ರೀತಿಯ ಸುಳಿಯಲಿ ನಾ ಸಿಲುಕಿರಲು
ನೀ ಆಗಾಗ ತಿರುಗಿ ನೋಡುತ್ತಳಿರಲು
ಹೃದಯ ಬಡಿತವು ಏರುತ್ತಿದೆ
ಮನಸ್ಸು ಹಕ್ಕಿಯಂತೆ ಹಾರುತಿದೆ.
ನಾ ಹಗಲುಗನಸು ಕಾಣುತ್ತಿರಲು
ಕನಸು ನಿನ್ನನೆ ಜಪಿಸುತ್ತಿರಲು
ಕಣ್ತೆರೆದಾಗ ನೀ ನನ್ನ ಎದುರಲೆ ಬರಲು
ಹೃದಯದ ಬಡಿತ ಏರುತ್ತಿದೆ
ಮನಸ್ಸು ಸಂತಸದಿ ಕುಣಿದಾಡುತಿದೆ.
- ನವೀನ್
Comments
Post a Comment