ನಮ್ಮ ತುಮಕೂರು ನಮ್ಮ ಹೆಮ್ಮೆ

 ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ.


ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಯೆಡಿಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಮಧುಗಿರಿ ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ.


ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ನಾಟಕ.


ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ.


ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು.

Comments

Popular posts from this blog

ಪ್ರಕೃತಿ ಸೊಬಗು

ಕಥೆಗಳು